ಸಿದ್ದರಾಮೋತ್ಸವ ಎಂಬ ಖಾಸಗಿ ಕಾರ್ಯಕ್ರಮಕ್ಕೆ ಬಂದ ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಪಕ್ಷದ ಅಧಿಕೃತ ಕಾರ್ಯಕ್ರಮಕ್ಕೆ ಹಾಜರಾಗೋದು ಅನುಮಾನ ಎಂಬಂತಾಗಿದೆ. ಪ್ರಿಯಾಂಕ ಗಾಂಧಿಯನ್ನ ಫ್ರೀಡಂಮಾರ್ಚ್‍ಗೆ ಕರೆಸಿ ಸಿದ್ದರಾಮಯ್ಯಗೆ ಹಾಗೂ ಸಿದ್ದರಾಮೋತ್ಸವದ ಕ್ರೆಡಿಟ್‍ಗೆ ಸವಾಲು ಹಾಕೋದು ಡಿ.ಕೆ.ಶಿವಕುಮಾರ್ ಲೆಕ್ಕಾಚಾರ ಎನ್ನಲಾಗಿತ್ತು. ಆದರೆ, ಸಿದ್ದರಾಮೋತ್ಸವಕ್ಕೆ ಬಂದ ರಾಹುಲ್‍ಗೆ ಫ್ರೀಡಂ ಮಾರ್ಚ್‍ಗೆ ಬರಲು ಆಸಕ್ತಿ ಇಲ್ಲ ಎನ್ನಲಾಗ್ತಿದೆ. ಡಿಕೆಶಿ ಒತ್ತಾಯದ ನಡುವೆ ಒಪ್ಪಿದ ಪ್ರಿಯಾಂಕ ಗಾಂಧಿ ಕೊರೋನಾದಿಂದ ಬಳಲುತ್ತಿದ್ದಾರೆ. ಫ್ರೀಡಂಮಾರ್ಚ್‍ಗೆ ಪ್ರಿಯಾಂಕ ಗಾಂಧಿಯನ್ನ ಕರೆಸಿ 1 ಲಕ್ಷ ಜನರನ್ನ ಸೇರಿಸಿ ಬೆಂಗಳೂರಿನಲ್ಲಿ ಅದ್ದೂರಿ ಪಾದಯಾತ್ರೆ ಮಾಡುವ ಪ್ಲಾನ್ ಡಿ.ಕೆ.ಶಿವಕುಮಾರ್ ಅವರದ್ದಾಗಿತ್ತು. ಆದರೆ ಈಗ ಆಗಸ್ಟ್ 15ರ ಪಾದಯಾತ್ರೆಗೆ ಪ್ರಿಯಾಂಕ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರಲ್ಲಿ ಯಾರೊಬ್ಬರು ಬರುವ ಭರವಸೆ ಇನ್ನೂ ಸಿಕ್ಕಿಲ್ಲ. ಡಿಕೆಶಿಯ ಅದ್ದೂರಿ ಫ್ರೀಡಂಮಾರ್ಚ್‍ಗೆ ಈಗ ಹೈಕಮಾಂಡ್ ನಾಯಕರ ಭಾಗವಹಿಸುವಿಕೆಯೆ ಅನುಮಾನ ಎಂಬಂತಾಗಿದೆ. ಈ ಮಧ್ಯೆ, ಎಐಸಿಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಚುನಾಯಿಸಲು ಪಕ್ಷ ಸಿದ್ಧತೆ ನಡೆಸುತ್ತಿದೆ. ಆಗಸ್ಟ್ 21ರಿಂದ ಈ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಆದ್ರೆ, ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧೆ ಮಾಡ್ತಾರಾ ಇಲ್ವಾ ಅನ್ನೊದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. <br /><br />#publictv #newscafe #hrranganath <br />